ಸೇತುವೆ ಬಾಜಿ
ಬಸವನಪುರ ಒಂದು ಪುಟ್ಟ ಊರು. ಮೈಸೂರಿನಿಂದ ಸುಮಾರು ೧೩ ಕಿ ಮಿ ದೂರದಲ್ಲಿದ್ದು ಕಬಿನಿ ನದಿಯ ತಾಣ. ಒಂದು ಕಾಲದಲ್ಲಿ ಈ ಊರನ್ನು ದಾಟಬೇಕಿದ್ದರ ಲಾಂಚ್ (launch ) ಬಳಸಬೇಕಿತ್ತು . ಈಗ ಇಲ್ಲಿ ಒಂದು ಸೇತುವೆ ಕಟ್ಟಲಾಗಿದೆ . ಸೇತುವೆ ಬಳಿಯ ಜಾಗ ತುಂಬಾ ವಿಸ್ಮಯವಾಗಿದ್ದು ಸದಾ ಹಸಿರಿನಿಂದ ತುಂಬಿರುತ್ತಿತ್ತು
ರಾಮು ಗೌಡ ಬಸವನಪುರ ಯುವಕ . ಹಳ್ಳಿಯ ಬ್ಯಾಂಕ್ ನಲ್ಲಿ office ಬಾಯ್ . ತುಂಬಾ ಬುದ್ದಿವಂತ ಆದರೆ ಸೊಂಬೇರಿ . ಸೇತುವೆ ಕೆಳಗೆ ಕುಳಿತು ಓಬ್ಬನೆ ಹಾಡಾ ಡುತ್ತ, ಒಬ್ಬನೆ ಚೌಕಾಬಾರ ಆಡುತ್ತಾ ಸಮಯ ಕಳೆಯುವದು ಇವನ ಹವ್ಯಾಸ.
ಸಿದ್ದು ಮೈಸೂರಿನವ. ಇವನ ಮಾವ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಸಧ್ಯದಲ್ಲೇ ಬಂದವರು . ಸಿದ್ದು ಮಾವನ ಮನೆಗೆ ವಾರಾಂತ್ಯ (weekend ) ಕಳೆಯಲು ಬರಿತಿದ್ದ . ಬ್ಯಾಂಕ್ ನ ಒಂದು ಸಮಾರಂಭದಲ್ಲಿ ಸಿದ್ದುಗೆ ರಾಮುವಿನ ಪರಿಚಯವಾಯಿತು . ಪರಿಚಯ ಸ್ನೇಹಕ್ಕೆ ಬೆಳೆಯಿತು . ಸಿದ್ದು, ರಾಮುನ ಭೇಟಿಯಾಗಲೆಂದೇ ಬಸವನಪುರಕ್ಕೆ ಬರತೊಡಗಿದ
ರಾಮು ತನ್ನ 'ಅಡ್ಡ ' ವನ್ನು ಸಿದ್ದುಗೆ ಪರಿಚಯಿಸಿದ್ದ. ಇದು ಈಗ ಇವರಿಬ್ಬರ ಪಾರ್ಟಿ ತಾಣ . ಇವರ ಭಾಷೆಯಲ್ಲಿ 'ತೀರ್ಥಕ್ಷೇತ್ರ'
ಸಿದ್ದು , ಒಮ್ಮೆ ಹೀಗೆ ಹಳ್ಳಿಗೆ ಬಂದಾಗ ಅಲ್ಲಿಯ ಸೇತುವೆ ಬಳಿ ಅಪಘಾತ ಆಗಿರುವುದನ್ನು ನೋಡಿ ಚಕಿತನಾದ . ಹಳ್ಳಿಯವರ ದೃಷ್ಟಿಯಲ್ಲಿ ಇದು bridge ದೆವ್ವದ ಕೃತ್ಯ .
ಮಧ್ಯಾನ್ಹ ರಾಮು ವನ್ನು ಭೇಟಿಯಾದಾಗ ಅವನು ಹೇಳಿದ 'ನೋಡ್ಲ ನಮ್ಮೊರ್ bridgeಉ ಇನ್ನೊಂದ್ ಬಲಿ ತಗಂಡದೆ '. 'ಪ್ರತೀ ಅಮಾವಾಸೆಗೆ ಒಂದ್ ಬಲಿ ತಗಳದೆಯ '. ಅದಕ್ಕೆ ಸಿದ್ದು 'non sense , ಬಲೀನಾ ? ಏನ್ ಆಯ್ತೋ ನಿಂಗೆ ? ನೀನು ಈ ದೆವ್ವ ಭೂತ ನಂಬ್ತೀಯಾ ?'
ರಾಮು 'ಹೂನ್ ಕಣ್ಲಾ , ಬಾಜಿ ಕಟ್ಟು ಬೇಕಿದ್ರೆ '. ಬಾಜಿಗೆ ಒಪ್ಪಿದ ರಾಮು ಅಮಾವಾಸ್ಯ ತಡ ರಾತ್ರಿಯಂದು ತನ್ನ ಬೈಕ್ ನಲ್ಲಿ ಸೇತುವೆ ಮೇಲೆ ಹೋಗುವದು . ಬದುಕುಳಿದಲ್ಲಿ ರಾಮು ಸಿದ್ದುಗೆ ರೂ ೧೦,೦೦೦ ಕೊಡುವದು.
ಮುಂದಿನ ಅಮಾವಾಸ್ಯೆ ರಂದು ಸಿದ್ದು ತನ್ನ ಗಾಡಿಯಲ್ಲಿ ಆ ಸೇತುವೆ ಮೇಲೆ ಭಯದಲ್ಲೇ ದಾಟಿದ . 'ದೆವ್ವ ಇಲ್ಲಾ ಭೂತ ಇಲ್ಲಾ , ಬರೀ ಭ್ರಾಂತು '. ಇದೆ ಕಿಕ್ ನಲ್ಲಿ ಸೇತುವೆ ಮೇಲೆ ಹಲವಾರುಬಾರಿ ಓಡಾಡಿದ . ಒಮ್ಮೆ ಹೀಗೆ ದಾಟುವಾಗ ಅಲ್ಲೇ ಮೂಲೆಯಲ್ಲಿ ರಾಮು ನಿಂತಿದ್ದ . ಸಿದ್ದು ಒಮ್ಮೆ ಬೆಚ್ಚು ಬಿದ್ದರು ರಾಮುನನ್ನು ಕಂಡು 'ಬಂದ್ಯಾ? ಸಾಕಾ ದೆವ್ವ ಭೂತ ಏನು ಇಲ್ಲ , ತೆಗಿ ಕಾಸು '.
ಮರುದಿನದ ಪತ್ರಿಕೆಯಲ್ಲಿ ಒಂದು ಸುದ್ದಿ . "ಮೈಸೂರಿನ ಯುವಕ ಬಸವನಪುರ ಸೇತುವೆಗೆ ಬಲಿ ". ರಾಮು ಮನಸ್ಸಿನಲೇ ಉದ್ಗರಿಸಿದ "ಕಾಸ್ ಕೊಡಬೇಕಂತೆ ಕಾಸು, ಅವನ್ ಯೋಗ್ಯತೆಗಿಷ್ಟು ... "

Comments